Wednesday, 28 June 2017
Thursday, 8 June 2017
Tuesday, 6 June 2017
SCHOOL PRAVESHOTSAVAM 2017-18
ಕಾಸರಗೋಡು
ನಗರದ ಬಿ.ಇ..ಎಂ.
ಹೈಯರ್
ಸೆಕಂಡರಿ ಶಾಲೆಯಲ್ಲಿ ಪ್ರವೇಶೋತ್ಸವವನ್ನು
ಬಹಳ ವಿಜೃಂಭಣೆಯಿಂದ ನಡೆಸಲಾಯಿತು.
ಬೆಳಗ್ಗೆ
ಶ್ರೀ ವೆಂಕಟರಮಣ ದೇವಸ್ಥಾನದ
ಪರಿಸರದಿಂದ ಶ್ರೀ ವೆಂಕಟರಮಣ
ಹೊಳ್ಳರ ನೇತೃತ್ವದಲ್ಲಿ ಬೇಂಡ್
ಮೇಳದೊಂದಿಗೆ ಹೊರಟ ಮೆರವಣಿಗೆಯು
ಪೇಟೆಯಾಗಿ ಸಾಗಿ ಶಾಲೆಗೆ ತಲುಪಿತು.
ಈ ಮೆರವಣಿಗೆಯಲ್ಲಿ
ನೂತನ ವಿಧ್ಯರ್ಥಿಗಳು,
ಅವರ ಹೆತ್ತವರು
ಪಿಟಿಎ ಸದಸ್ಯರು ಹಾಗೂ ಶಿಕ್ಷಕ
ವೃಂದದವರು ಪಾಲ್ಗೊಂಡರು.
ನಂತರ ಶಾಲೆಯ
ಶ್ರೀಮತಿ ಮನೋರಮ ಶೆಣೈ ಮೆಮೋರಿಯಲ್
ಸಭಾಂಗಣದಲ್ಲಿ ಸಭೆ ಸೇರಲಾಯಿತು.
ವಿದ್ಯಾರ್ಥಿನಿಯರಾದ
ಅಖಿಲ ಮತ್ತು ಅಪೇಕ್ಷರ ಪ್ರಾರ್ಥನೆಯೊಂದಿಗೆ
ಕಾರ್ಯಕ್ರಮವು ಆರಂಭವಾಯಿತು.
ನೂತನವಾಗಿ
ಮುಖೋಪಾಧ್ಯಾಯರಾಗಿ ಅಧಿಕಾರ
ಸ್ವೀಕರಿಸಿದ ಶ್ರೀ ರಾಜೇಶ್ಚಂದ್ರ.
ಕೆ.
ಪಿ.
ಅವರನ್ನು
ವೇದಿಕೆಗೆ ಸ್ವಾಗತಿಸಿ ಅಭಿನಂದಿಸಲಾಯಿತು.
ಮುಖ್ಯ
ಅತಿಥಿಗಳಾಗಿಳಾಗಿ ಭಾಗವಹಿಸಿದ
ವಾರ್ಡ್ ಕಾಂನ್ಸಿಲರ್ ಶ್ರೀಮತಿ
ಶ್ರೀಲತ ಟೀಚರ್ ಶಿಕ್ಷಕರ ಮಹತ್ವದ
ಕುರಿತು ಮಾತನಾಡಿದರು.
ಪಿ.ಟಿ.ಎ.
ಅಧ್ಯಕ್ಷರಾದ
ರವಿಚಂದ್ರ ಕೇಳುಗುಡ್ಡೆ,
ಉಪಾಧ್ಯಾಕ್ಷರು
ಶ್ರೀ ಕೃಷ್ಣ ಭಟ್ (ನಿವೃತ
ಮುಖ್ಯೋಪಾಧ್ಯಾಯರು)ಎಕ್ಸ್
ಟ್ಯೂಟಿವ್ ಸದಸ್ಯ ಶ್ರೀ ವೆಂಕಟರಮಣ
ಹೊಳ್ಳ ನೂತನ ಶೈಕ್ಷಣಿಕ ವರ್ಷಕೆ
ಶುಭಾಹಾರೈಸಿದರು. ಶ್ರೀ
ಗಣೇಶ್ ಮಾಸ್ಟರ್ ಶಾಲಾ ನಿಯಮಗಳನ್ನು
ತಿಳಿಸಿದರು. ನೂತನವಾಗಿ
ಶಾಲೆಗೆ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ
ಅತಿಥಿಗಳಿಂದ ಪುಸ್ತಕ ಮತ್ತು
ಪೆನ್ನು ಹಾಗಲ್ಲರಿಗೂ ಸಿಹಿ ತಿಂಡಿ
ಹಂಚಲಾಯಿತು.
ಶ್ರೀ
ಯಶವಂತ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ಶ್ರೀ
ಕನಕರಾಜ ವಂದಿಸಿದರು.ಶ್ರೀಮತಿ
ರೋಹಿತಾಕ್ಷಿ ಟೀಚರ್ ನಿರೂಪಿಸಿದರು.
Subscribe to:
Posts (Atom)