ದಸರಾ ನಾಡಹಬ್ಬಸೌಹಾದ೯ದ ಹಬ್ಬವಾಗಲಿ
ಕಾಸರಗೋಡು : 'ಒಕ್ಟೋಬರ್ 20.ದಸರಾ ನಾಡ ಹಬ್ಬವನ್ನು ಶಾಲೆಯಲ್ಲಿ ಆಚರಿಸುವ ಮೂಲಕ ವಿದ್ಯಾಥಿ೯ಗಳಲ್ಲಿ ಸಾಮಾಜಿಕ ಸೌಹಾದ೯ತೆ ಬೆಳೆಯಲಿ ' ಎ೦ದು ಬಿ.ಇ.ಎ೦ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ದಸರಾ ನಾಡಹಬ್ಬವನ್ನು ಉದ್ಘಾಟಿಸಿ ಹಬ್ಬದ ಮಹತ್ವದಕುರಿತು ಭಾಷಣ ಮಾಡಿದ ಹೈಯರ್ ಸೆಕೆಂಡರಿ ಕನ್ನಡ ಅಧ್ಯಾಪಿಕೆ ಶ್ರೀಮತಿ ಪುಷ್ಪಲತ ಟೀಚರ್ ಸಂದೇಶವನ್ನು ನೀಡಿದರು. ಕಾಯ೯ಕ್ರಮಕ್ಕೆ ಮುಖ್ಯೋಪಾದ್ಯಾಯರು ಶ್ರೀ ಟಿ.ಎನ್ ಬಾಲಕೃಷ್ಣ ಸ್ವಾಗತಿಸಿದರು . ಶ್ರೀಮತಿ ವಿದ್ಯಾ ಟೀಚರು ವಂದಿಸಿದರು. ವಿದ್ಯಾಥಿ೯ಗಳಿಗಾಗಿ ಬೆಲೂನ್ ಬೆಲೆನ್ಸ್ ರೇಸ್ , ಗೋಣಿಚೀಲದಓಟ ,ಮೂರುಕಾಲಿನ ಓಟ, ಸಂಗೀತ ಕುಚಿ೯ ,ಲಿಂಬೆ ಚಮಚ ಓಟ ಮತ್ತು ಮಡಿಕೆ ಒಡೆಯುವ ಸ್ಪಧೆ೯ಗಳನ್ನು ನಡೆಸಲಾಯಿತು. ದೈಹಿಕ ಶಿಕ್ಷಕರಾದ ಅನಿಲ್ ಪಿ.ಎ ಅವರ ನಿರ್ದೇಶನದಂತೆ ನಡೆದ ವಿವಿಧ ವಿನೋದಾವಳಿ ಸ್ಪಧೆ೯ಗೆ ಇತರ ಅಧ್ಯಾಪಕ ವಗ೯ಹಾಗೂ ಸಿಬ್ಬಂದಿ ವಗ೯ದವರು ಸಹಕಾರವಿತ್ತರು. ಯಶವಂತ ಮಾಸ್ಟ್ರ್ ನಿರಗ೯ಳವಾದ ಕಮೆಂಟ್ರಿಯು ಕಾಯ೯ಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು. ಸಮಾರೋಪ ಸಮಾರಂಭದಲ್ಲಿ ಪಿ ಟಿ ಎ ಅಧ್ಯಕ್ಷರಾದ ಶ್ರೀ ರವಿಚಂದ್ರ ಕೇಳುಗುಡ್ಡೆ ಅವರ ಉಪಸ್ಥಿತಿಯಲ್ಲಿ ವಿಜೇತರಾದ ವಿದ್ಯಾಥಿ೯ಗಳಿಗೆ ಬಹುಮಾನ ಹಂಚಲಾಯಿತು. ಒಂದು ದಿನವಿಡೀ ಮುಂದುವರಿದ ಕಾಯ೯ಕ್ರಮವು ಸಂಜೆಗೆ ಮುಕ್ತಾಯವಾಯಿತು.
No comments:
Post a Comment