ಬಿ.ಇ.ಎ೦.ಎಚ್ಎಸ್.ಎಸ್.ಕಾಸರಗೋಡು
ಬಿ.ಇ.ಎ೦.ಹೆಚ್.ಎಸ್.ಎಸ್.ಕಾಸರಗೋಡು
ಶಾಲೆಯಲ್ಲಿ 2015-16 ರಲ್ಲಿ
ಪ್ರವೇಶೋತ್ಸವವು ವಿನೂತನ ಶೈಲಿಯಲ್ಲಿ
ನಡೆಯಿತು.ಹೊಸದಾಗಿ
ದಾಖಲಾದ ನೂತನ ಶಾಲೆಯನ್ನು
ಪ್ರವೇಶಿಸುವ ವಿದ್ಯಾಥಿ೯ಗಳನ್ನು
ಶಾಲಾ ವಿದ್ಯಾಧಿ೯ಗಳು ಹಾಗೂ
ಅಧ್ಯಾಪಕವೃಂದದವರು ಹೂವುಗಳನ್ನು
ಅಪಿ೯ಸುವ ಮೂಲಕ ಸ್ವಾಗತಿಸಿದರು.
ಮೆರವಣಿಗೆಯಲ್ಲಿ ಬಂದ
ವಿದ್ಯಾಥಿ೯ಗಳನ್ನು ಹಾಗೂ ಅವರ
ಹೆತ್ತವರನ್ನು ಅಲಂಕೃತವಾದ
ಸಭಾಂಗಣದಲ್ಲಿ ಕುಳ್ಳಿರಿಸಿ ಶಾಲಾ
ವಿದ್ಯಾಥಿ೯ನಿಯರ ಶುಭಾಶಯಗೀತೆಯೊಂದಿಗೆ
ಕಾಯ೯ಕ್ರಮವು ಆರಂಭವಾಯಿತು.
ಮುಖ್ಯೋಪಾಧ್ಯಾಯರಾದ
ಶ್ರೀ ಟಿ . ಎನ್
ಬಾಲಕೃಷ್ಣ ಸ್ವಾಗತಿಸಿ ಶಾಲಾ
ನಿಯಮಾವಳಿಗಳನ್ನು ಓದಿ ಹೇಳಿದರು.
ರಕ್ಷಕ-ಶಿಕ್ಷಕ
ಸಂಘದ ಅಧ್ಯಕ್ಷರಾದ ಶ್ರೀ ರವಿ
ಕೇಳುಗುಡ್ಡೆ ಶುಭಾಶಂಸನೆಗೈದರು.
ಶ್ರೀ ಮತಿ ಶ್ರೀಲತಾ
ಟೀಚರ್ ವಾಡ್೯ ಕೌನ್ಸಿಲರ್ ಸಭೆಯಲ್ಲಿ
ಉಪಸ್ಥಿತರಿದ್ದರು. ಕಾಯ೯ಕ್ರಮದ
ಕೊನೆಯಲ್ಲಿ ಸಿಹಿ ತಿಂಡಿ
ವಿತರಿಸಲಾಯಿತು. ಎಲ್ಲ
ಶಿಕ್ಷಕ ವೃಂದದವರೂ ಕಾಯ೯ಕ್ರಮದಲ್ಲಿ
ಉಪಸ್ಥಿತರಿದ್ದರು.
No comments:
Post a Comment