Monday, 29 June 2015


ಮಾದಕ ದ್ರವ್ಯ ವ್ಯಸನಿ ಮುಕ್ತ ಸಮಾಜವಾಗಲಿ

ಜೂನ್ 26!-''ಭವಿಷ್ಯದಲ್ಲಿ ಮಾದಕ ದ್ರವ್ಯ ವ್ಯಸನಿ ಗಳಿಂದ ಸಮಾಜ ಮುಕ್ತವಾಗಲಿ ''ಇದಕ್ಕಾಗಿ ವಿದ್ಯಾಥಿ೯ಗಳು ಮಾದಕವಸ್ತುಗಳಿಂದುಂಟಾಗುವ ದುಷ್ಪರಿಣಾಮಗಳ ಕುರಿತು ಅರಿತು ಇತರರಿಗೆ ಅರಿವು ಮೂಡಿಸಬೇಕು ಎ೦ದು ಶ್ರೀ ಟಿ ಎನ್ ಬಾಲಕೃಷ್ಣ ಮುಖ್ಯೋಪಾಧ್ಯಾಯರು ಬಿ..ಎ೦.ಹೆಚ್.ಎಸ್.ಎಸ್ ಕಾಸರಗೋಡು ಇವರು 'ವಿಶ್ವಮಾದಕದ್ರವ್ಯ ವಿರೋಧಿ ದಿನ 'ದ ಅಂಗವಾಗಿ ತಮ್ಮ ಶಾಲೆಯಲ್ಲಿ ನಡೆಸಲಾದ ಎಸಂಬ್ಲಿಯಲ್ಲಿ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು .ವಿದ್ಯಾಥಿ೯ಗಳು ಮಾದಕ ದ್ರವ್ಯ ವ್ಯಸನದ ವಿರುದ್ಧವಾಗಿ ಪ್ರತಿಜ್ಞೆಯನ್ನು ಮಾಡಿದರು. ವಿಜ್ಞಾನ ಕ್ಲಬ್ ಮತ್ತು 'ಲಹರಿ ವಿರುದ್ಧ 'ಕ್ಲಬ್ ಜಂಟಿಯಾಗಿ ಆಯೋಜಿಸಿದ ಕಾಯ೯ಕ್ರಮದಲ್ಲಿ ಸಧಸ್ಯರು ಹಾಗೂ ಅದ್ಯಾಪಕರುಗಳ ಸಹಕಾರದೊಂದಿಗೆ ಮದ್ಯ ವ್ಯಸನಗಳ ಅನಾಹುತಗಳ ಕುರಿತು ಘೋಷಣಾ ಫಲಕಗಳು ,ಕೋಲೆಶ್ ಗಳು ಹಾಗೂ ದೃಶ್ಯ ಚಿತ್ರಗಳನ್ನು ಪ್ರದಶಿ೯ಸಿ ಎಲ್ಲಾ ತರಗತಿಗಳಿಗೆ ಭೆಟಿನೀಡಿ ಜನಜಾಗೃತಿ ಮೂಡಿಸಲು ಪ್ರಯತ್ನಿಸಿದರು . ಭಾಷಣ , ಚಿತ್ರರಚನ ಸ್ಪಧೆ೯ ಗಳನ್ನು ನಡೆಸಲಾಯಿತು. ಶಿಕ್ಷಕ ಹಾಗೂ ಶಿಕ್ಷಕೇತರರ ಸಹಕಾರದೊಂದಿಗೆ ಈ ಜನಜಾಗೃತಿ ಕಾಯ೯ಕ್ರಮವು ಯಶಸ್ವಿಯಾಗಿ ನಡೆಯಿತು.



No comments:

Post a Comment